ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.

ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ

Wednesday, July 9, 2008

ಕಳಿಸಿಕೊಟ್ಟು .... ತಿಳಿದುಕೊಂಡೆ !

ಕಳಿಸಿಕೊಟ್ಟೆ ನನ್ನವಳ ನಾನೇ ಅಷಾಡಕ್ಕೆ
ಅವಳ ತವರಿಗೆ...

ಇರಬಹುದು ಬೇಕಾದಂತೆ ಅಂದುಕೊಂಡೆ
ಸಂತೋಷದಿ ಹೊರಟೆ ನನ್ನ ಊರ ಕಡೆಗೆ,
ಮಾಯವಾಯಿತು ಸಂತೊಷವೆಲ್ಲ
ನಾ ಅಡುಗೆ ಮನೆಗೆ ಬಂದಾಕ್ಷಣ...

ಕೆಲಸದಿಂದ ಮನೆಗೆ ಬಂದಾಕ್ಷಣ
ಬರಮಾಡಿಕೊಳ್ಳಲಿಲ್ಲ ಬಾಗಿಲಲ್ಲಿ ನಗುವು,
ಕಾಡತೊಡಕಿತು ಅವಳ ನೆನಪು
ಮನೆಗೆಲಸ ಕಂಡಾಗಲೆಲ್ಲ...

ಕೂತಲ್ಲಿ ನಿಂತಲ್ಲಿ ಅವಳ ನೆನಪು
ಕಳೆದಿರುವೆ ಅಷಾಡವ ನೆನಪಿನಲ್ಲೇ,
ಬೇಸರ ತಂದರೂ ಅಷಾಡದ ಮಾಸ
ತಿಳಿಸಿತು ಬೆಸುಗೆಯ ಅರ್ಥವನ್ನು..

Wednesday, July 2, 2008

ಅಷಾಡದ ಹೊತ್ತು

ಏತಕ್ಕೆ ಬಂತಪ್ಪ ಅಷಾಡದ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು ||ಪ||

ನನ್ನವಳ ಅರ್ಥ ಮಾಡಿಕೊಳ್ಳೋ ಹೊತ್ತು
ನವ ಜೀವನದ ರಸದೌತಣದ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ಪ್ರೀತಿಯ ಹೊಳೆಯಲ್ಲಿ ನಿತ್ತಿದ್ದ ಹೊತ್ತು
ಮಿಂದು ನೀರಾಗಿ ಸೇರುವಾಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ಮೂಸಂಜೆಯಲ್ಲಿ ಕೈಹಿಡಿದು ನಡೆಯುವಾಹೊತ್ತು
ನಡೆಯುತ ಕನಸನೇಳುವಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ವರ್ಷಗಳಿಂದ ಕಾದಿದ್ದ ಹೊತ್ತು
ಕೂಡಿಟ್ಟ ಮಾತನು ಹೇಳುವಾ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು