ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.

ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ

Sunday, May 17, 2009

ಯಾರು ನಗಿಸಿದರೋ ನಿನ್ನ ?

ಯಾರು ನಗಿಸಿದರೋ
ನಿನ್ನ ಕಂದ ಕಂದ..
ನಿನ್ನ ನಗುವೆ ನಮಗೆಲ್ಲ
ಆನಂದ ಆನಂದ...

ಪೀಲಾಂಗೋವಿ ಕಳ್ಳ ಕೃಷ್ಣ
ನಿನ್ನ ನಗಿಸಿದನ?
ತನ್ನ ನವಿಲುಗಾರಿಯಿಂದ
ತನ್ನ ಮುರಲಿ ರಾಗದಿಂದ
ನಿನ್ನ ನಗಿಸಿದನಾ ಕಂದ ಕಂದ....

ಏಕದಂತ ಗಣಪಾ
ನಿನ್ನ ನಗಿಸಿದನ?
ತನ್ನ ಸೋಂಡಲಿಂದ
ತನ್ನ ದುಮ್ಮು ಹೊಟ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...

ಕಪಿರಾಜ ಹನುಮ
ನಿನ್ನ ನಗಿಸಿದನ?
ತನ್ನ ಬಲದಿಂದ
ತನ್ನ ಕಾಪೀಚೆಸ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...

Friday, May 15, 2009

ಆಟವಾಡು ಬಾರೊ ಕೃಷ್ಣ.....

ಆಟವಾಡು ಬಾರೊ ಕೃಷ್ಣ
ನನ್ನ ಮಗನ ಜೊತೆಗೆ
ಆಟದಲ್ಲೇ ನಾಟ್ಯವಾಡೋ ಕೃಷ್ಣ
ನನ್ನ ಕಂದನ ಜೊತೆಗೆ

ಜೊ...ಟಾಠ ಆಡುಬಾರೊ
ಕಣ್ಣ ಮೂಚಾಲೆ ಅಡುಬಾರೊ
ಬೆರಳಿಡಿದು ಆಡೂ ಬಾರೊ
ನನ್ನ ಕಂದನ ಜೊತೆಗೆ

ಬೆಣ್ಣೆಯ ತಿನ್ನು ಬಾರೊ
ಚಕ್ಕುಲಿಯ ತಿನ್ನು ಬಾರೊ
ಕೈತುತ್ತು ತಿನ್ನು ಬಾರೊ
ನನ್ನ ಕಂದನ ಜೊತೆಗೆ

ಬೆಣ್ಣೆ ಕದಿ ಬೇಡ ಕೃಷ್ಣ
ಕದಿಯಲು ಕರೆದೋಗಬೇಡ
ಕರೆದೋದರೆ ನನ್ನ ಮಗನ
ಕೊಟ್ಟೆನು ಬೆರಳಿನ ಬರೆಯ

Thursday, April 23, 2009

ಕನಸು - ಮನಸು

ನನ್ನದೇ ಕನಸು,ನನ್ನದೆ ಮನಸು..
ಕದನವಡಿದೆ ನನ್ನದೇ ತನುವಿನಲ್ಲಿ
ಮುಖ್ಖ ಪ್ರೇಕ್ಷಕ ನನ್ನ ಆತ್ಮವೂ

ದೇಶ ವಿದೇಶ ಸುತ್ತಾಡಬೇಕು
ಬಣ್ಣದ ಲೋಕ ನೋಡಬೇಕೆಂದಿದ್ದೆ ಕನಸು
ಮೈಬಣ್ಣ ನೂಡಿ ಮಾತಾಡುವ ವಿದೇಶವೇತಕೆ
ಭಾವನೆಗಳಿಲ್ಲದ ಬಣ್ಣದಲ್ಲೇನಿದೆ ಎಂದಿದೆ ಮನವು

ಬಾಂಧವ್ಯದ ಬೆಸುಗೆಯಲ್ಲಿ ನೆಮ್ಮದಿ
ನಮ್ಮವರ ಜೊತೆ ಬಾಳಿದರೆ ಚಂದವೆಂದಿದೆ ಮನಸು
ಬಂಧವ್ಯವೆಲ್ಲ ನಿನ್ನ ಬೆರಗು, ನೀ ಸೋತಾಗ
ಜೊತೆಯಾರಿದರು? ಎಂದಿದೆ ಕನಸು

ನಿನ್ನದೇನಿದೆ ? ಕಾಂಚನವಿದರೆ ಕೈಲಾಸ
ನಿನ್ನದಾಗಿಸಿಕೊ ಜಾಗವ ಎಲ್ಲರೆದಿರುರೆಂದಿದೆ ಕನಸು
ನಾ ಸತ್ತೇನು,ತೊರೆಯಲಾರೆ ನನ್ನತನವ
ಕೊನೆಗೊಮ್ಮೆ ನೀ ಸೋಲುವೆ ಎಂದು ಮೌನವಾಗಿದೆ ಮನಸು

Saturday, March 14, 2009

ಅಮ್ಮ ತಿಳೀದೇ ನಿನ್ನ

ಅಮ್ಮ ತಿಳೀದೇ ನಿನ್ನ
ಪ್ರೀತಿಯ ಆಳವನ್ನು
ನಾ ತಂದೆಯಾದ ಬಳಿಕ,

ಎಷ್ಟೂ ಬಾರೀ ಅತ್ತೂ ನೀ
ದೇವರ ಮೊರೆ ಹೊಗಿದೆಯೊ
ನನ್ನ ಹಠ ಮಾರಿತನಕೆ,

ನನ್ನ ಹಸಿವ ನೀ ತಿಳಿದೆ
ಅದನ ಅರಿಯದೆ ತುತ್ತು ಬೆಡ ಅಂದೆ
ನೀ ಹಸಿದೆ ನಾ ತಿನ್ನೊವರೆಗೆ,

ತಿರುಗಿ ನಿನ್ನ ಮಾತಿಗೆ ನಾ
ಮಾತಾಡಿದ ದಿನದಂದು
ನಿನ್ನ ಕರುಳೆಷ್ಟು ನೊಂದಿದೆಯೊ,

ಇಂದೆಕೊ ನಿನ್ನ ಮಡಿಲಲ್ಲಿ
ಮಲಗಬೇಕೆಂದಿದೆ ಮನವೂ
ಕ್ಷಮಿಸಿ ಮಲಗಿಸಿಕೋ ನನ್ನನು,