ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.

ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ

Thursday, April 23, 2009

ಕನಸು - ಮನಸು

ನನ್ನದೇ ಕನಸು,ನನ್ನದೆ ಮನಸು..
ಕದನವಡಿದೆ ನನ್ನದೇ ತನುವಿನಲ್ಲಿ
ಮುಖ್ಖ ಪ್ರೇಕ್ಷಕ ನನ್ನ ಆತ್ಮವೂ

ದೇಶ ವಿದೇಶ ಸುತ್ತಾಡಬೇಕು
ಬಣ್ಣದ ಲೋಕ ನೋಡಬೇಕೆಂದಿದ್ದೆ ಕನಸು
ಮೈಬಣ್ಣ ನೂಡಿ ಮಾತಾಡುವ ವಿದೇಶವೇತಕೆ
ಭಾವನೆಗಳಿಲ್ಲದ ಬಣ್ಣದಲ್ಲೇನಿದೆ ಎಂದಿದೆ ಮನವು

ಬಾಂಧವ್ಯದ ಬೆಸುಗೆಯಲ್ಲಿ ನೆಮ್ಮದಿ
ನಮ್ಮವರ ಜೊತೆ ಬಾಳಿದರೆ ಚಂದವೆಂದಿದೆ ಮನಸು
ಬಂಧವ್ಯವೆಲ್ಲ ನಿನ್ನ ಬೆರಗು, ನೀ ಸೋತಾಗ
ಜೊತೆಯಾರಿದರು? ಎಂದಿದೆ ಕನಸು

ನಿನ್ನದೇನಿದೆ ? ಕಾಂಚನವಿದರೆ ಕೈಲಾಸ
ನಿನ್ನದಾಗಿಸಿಕೊ ಜಾಗವ ಎಲ್ಲರೆದಿರುರೆಂದಿದೆ ಕನಸು
ನಾ ಸತ್ತೇನು,ತೊರೆಯಲಾರೆ ನನ್ನತನವ
ಕೊನೆಗೊಮ್ಮೆ ನೀ ಸೋಲುವೆ ಎಂದು ಮೌನವಾಗಿದೆ ಮನಸು