ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.

ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ

Sunday, March 6, 2011

ಒಂದು ಕನಸು

ನಮ್ಮ ಬಾಳಲ್ಲಿ ಪುಟ್ಟ ಮಾಗುವುವಿರುವುದು
ಪುಟ್ಟ ಮಗುವಿನಲ್ಲಿ ಪುಟ್ಟ ಮನಸುವಿರುವುದು
ಪುಟ್ಟ ಮನಸಿನಲ್ಲಿ ನೂರು ಕನಸುವಿರುವುದು
ನೂರು ಕನಸ ನೆನಸು ಮಾಡೋ
ಒಂದು ಕನಸು ನಮ್ಮದು

Sunday, May 17, 2009

ಯಾರು ನಗಿಸಿದರೋ ನಿನ್ನ ?

ಯಾರು ನಗಿಸಿದರೋ
ನಿನ್ನ ಕಂದ ಕಂದ..
ನಿನ್ನ ನಗುವೆ ನಮಗೆಲ್ಲ
ಆನಂದ ಆನಂದ...

ಪೀಲಾಂಗೋವಿ ಕಳ್ಳ ಕೃಷ್ಣ
ನಿನ್ನ ನಗಿಸಿದನ?
ತನ್ನ ನವಿಲುಗಾರಿಯಿಂದ
ತನ್ನ ಮುರಲಿ ರಾಗದಿಂದ
ನಿನ್ನ ನಗಿಸಿದನಾ ಕಂದ ಕಂದ....

ಏಕದಂತ ಗಣಪಾ
ನಿನ್ನ ನಗಿಸಿದನ?
ತನ್ನ ಸೋಂಡಲಿಂದ
ತನ್ನ ದುಮ್ಮು ಹೊಟ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...

ಕಪಿರಾಜ ಹನುಮ
ನಿನ್ನ ನಗಿಸಿದನ?
ತನ್ನ ಬಲದಿಂದ
ತನ್ನ ಕಾಪೀಚೆಸ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...

Friday, May 15, 2009

ಆಟವಾಡು ಬಾರೊ ಕೃಷ್ಣ.....

ಆಟವಾಡು ಬಾರೊ ಕೃಷ್ಣ
ನನ್ನ ಮಗನ ಜೊತೆಗೆ
ಆಟದಲ್ಲೇ ನಾಟ್ಯವಾಡೋ ಕೃಷ್ಣ
ನನ್ನ ಕಂದನ ಜೊತೆಗೆ

ಜೊ...ಟಾಠ ಆಡುಬಾರೊ
ಕಣ್ಣ ಮೂಚಾಲೆ ಅಡುಬಾರೊ
ಬೆರಳಿಡಿದು ಆಡೂ ಬಾರೊ
ನನ್ನ ಕಂದನ ಜೊತೆಗೆ

ಬೆಣ್ಣೆಯ ತಿನ್ನು ಬಾರೊ
ಚಕ್ಕುಲಿಯ ತಿನ್ನು ಬಾರೊ
ಕೈತುತ್ತು ತಿನ್ನು ಬಾರೊ
ನನ್ನ ಕಂದನ ಜೊತೆಗೆ

ಬೆಣ್ಣೆ ಕದಿ ಬೇಡ ಕೃಷ್ಣ
ಕದಿಯಲು ಕರೆದೋಗಬೇಡ
ಕರೆದೋದರೆ ನನ್ನ ಮಗನ
ಕೊಟ್ಟೆನು ಬೆರಳಿನ ಬರೆಯ

Thursday, April 23, 2009

ಕನಸು - ಮನಸು

ನನ್ನದೇ ಕನಸು,ನನ್ನದೆ ಮನಸು..
ಕದನವಡಿದೆ ನನ್ನದೇ ತನುವಿನಲ್ಲಿ
ಮುಖ್ಖ ಪ್ರೇಕ್ಷಕ ನನ್ನ ಆತ್ಮವೂ

ದೇಶ ವಿದೇಶ ಸುತ್ತಾಡಬೇಕು
ಬಣ್ಣದ ಲೋಕ ನೋಡಬೇಕೆಂದಿದ್ದೆ ಕನಸು
ಮೈಬಣ್ಣ ನೂಡಿ ಮಾತಾಡುವ ವಿದೇಶವೇತಕೆ
ಭಾವನೆಗಳಿಲ್ಲದ ಬಣ್ಣದಲ್ಲೇನಿದೆ ಎಂದಿದೆ ಮನವು

ಬಾಂಧವ್ಯದ ಬೆಸುಗೆಯಲ್ಲಿ ನೆಮ್ಮದಿ
ನಮ್ಮವರ ಜೊತೆ ಬಾಳಿದರೆ ಚಂದವೆಂದಿದೆ ಮನಸು
ಬಂಧವ್ಯವೆಲ್ಲ ನಿನ್ನ ಬೆರಗು, ನೀ ಸೋತಾಗ
ಜೊತೆಯಾರಿದರು? ಎಂದಿದೆ ಕನಸು

ನಿನ್ನದೇನಿದೆ ? ಕಾಂಚನವಿದರೆ ಕೈಲಾಸ
ನಿನ್ನದಾಗಿಸಿಕೊ ಜಾಗವ ಎಲ್ಲರೆದಿರುರೆಂದಿದೆ ಕನಸು
ನಾ ಸತ್ತೇನು,ತೊರೆಯಲಾರೆ ನನ್ನತನವ
ಕೊನೆಗೊಮ್ಮೆ ನೀ ಸೋಲುವೆ ಎಂದು ಮೌನವಾಗಿದೆ ಮನಸು

Saturday, March 14, 2009

ಅಮ್ಮ ತಿಳೀದೇ ನಿನ್ನ

ಅಮ್ಮ ತಿಳೀದೇ ನಿನ್ನ
ಪ್ರೀತಿಯ ಆಳವನ್ನು
ನಾ ತಂದೆಯಾದ ಬಳಿಕ,

ಎಷ್ಟೂ ಬಾರೀ ಅತ್ತೂ ನೀ
ದೇವರ ಮೊರೆ ಹೊಗಿದೆಯೊ
ನನ್ನ ಹಠ ಮಾರಿತನಕೆ,

ನನ್ನ ಹಸಿವ ನೀ ತಿಳಿದೆ
ಅದನ ಅರಿಯದೆ ತುತ್ತು ಬೆಡ ಅಂದೆ
ನೀ ಹಸಿದೆ ನಾ ತಿನ್ನೊವರೆಗೆ,

ತಿರುಗಿ ನಿನ್ನ ಮಾತಿಗೆ ನಾ
ಮಾತಾಡಿದ ದಿನದಂದು
ನಿನ್ನ ಕರುಳೆಷ್ಟು ನೊಂದಿದೆಯೊ,

ಇಂದೆಕೊ ನಿನ್ನ ಮಡಿಲಲ್ಲಿ
ಮಲಗಬೇಕೆಂದಿದೆ ಮನವೂ
ಕ್ಷಮಿಸಿ ಮಲಗಿಸಿಕೋ ನನ್ನನು,

Saturday, November 1, 2008

ಬಾ ಶಾರದೆ ನನಗೆ ಪಾಠ ಹೇಳಿಕೊಡು . . .

ಬಾ ಶಾರದೆ ನನಗೆ ಪಾಠ ಹೇಳಿಕೊಡು

ದಿನಗಳಿಗೆಯನೋಡಿ
ಗುರು ಪೂಜೆ ಮಾಡಿ
ಮೊದಲ ಅಕ್ಷರ ಬರೆಸಿದ
ನನ್ನ ತಾಯಿಯಂತೆ. . .
ಬಾ ಶಾರದೆ ನನಗೆ ಪಾಠ ಹೇಳಿಕೊಡು
ನನ್ನ ತಾಯಿಯಂತೆ,

ಹಿರಿತನವ ಮೆರೆದು
ನನ್ನಂತೆ ನೀನಾಗುಯೆಂದು
ಆಟದಲ್ಲೇ ಪಾಠ ಹೇಳಿದ
ನನ್ನ ಹಿರಿಯಕ್ಕನಂತ್ತೆ . . .
ಬಾ ಶಾರದೆ ನನಗೆ ಪಾಠ ಹೇಳಿಕೊಡು
ನನ್ನ ಹಿರಿಯಕ್ಕನಂತ್ತೆ ,

ತನಗೆ ತಿಳಿದಿರುವುದನ್ನೇ ಕೇಳಿ
ನಿನಗೆ ಇಷ್ಟು ತಿಳಿದಿಲ್ಲವೆಯೆಂದು
ತುಸು ಜಂಭದಿಂದ ನಗುವ
ನನ್ನ ಮಗುವಿನಂತ್ತೆ . . .
ಬಾ ಶಾರದೆ ನನಗೆ ಪಾಠ ಹೇಳಿಕೊಡು
ನನ್ನ ಮಗುವಿನಂತ್ತೆ ,

Wednesday, July 9, 2008

ಕಳಿಸಿಕೊಟ್ಟು .... ತಿಳಿದುಕೊಂಡೆ !

ಕಳಿಸಿಕೊಟ್ಟೆ ನನ್ನವಳ ನಾನೇ ಅಷಾಡಕ್ಕೆ
ಅವಳ ತವರಿಗೆ...

ಇರಬಹುದು ಬೇಕಾದಂತೆ ಅಂದುಕೊಂಡೆ
ಸಂತೋಷದಿ ಹೊರಟೆ ನನ್ನ ಊರ ಕಡೆಗೆ,
ಮಾಯವಾಯಿತು ಸಂತೊಷವೆಲ್ಲ
ನಾ ಅಡುಗೆ ಮನೆಗೆ ಬಂದಾಕ್ಷಣ...

ಕೆಲಸದಿಂದ ಮನೆಗೆ ಬಂದಾಕ್ಷಣ
ಬರಮಾಡಿಕೊಳ್ಳಲಿಲ್ಲ ಬಾಗಿಲಲ್ಲಿ ನಗುವು,
ಕಾಡತೊಡಕಿತು ಅವಳ ನೆನಪು
ಮನೆಗೆಲಸ ಕಂಡಾಗಲೆಲ್ಲ...

ಕೂತಲ್ಲಿ ನಿಂತಲ್ಲಿ ಅವಳ ನೆನಪು
ಕಳೆದಿರುವೆ ಅಷಾಡವ ನೆನಪಿನಲ್ಲೇ,
ಬೇಸರ ತಂದರೂ ಅಷಾಡದ ಮಾಸ
ತಿಳಿಸಿತು ಬೆಸುಗೆಯ ಅರ್ಥವನ್ನು..

Wednesday, July 2, 2008

ಅಷಾಡದ ಹೊತ್ತು

ಏತಕ್ಕೆ ಬಂತಪ್ಪ ಅಷಾಡದ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು ||ಪ||

ನನ್ನವಳ ಅರ್ಥ ಮಾಡಿಕೊಳ್ಳೋ ಹೊತ್ತು
ನವ ಜೀವನದ ರಸದೌತಣದ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ಪ್ರೀತಿಯ ಹೊಳೆಯಲ್ಲಿ ನಿತ್ತಿದ್ದ ಹೊತ್ತು
ಮಿಂದು ನೀರಾಗಿ ಸೇರುವಾಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ಮೂಸಂಜೆಯಲ್ಲಿ ಕೈಹಿಡಿದು ನಡೆಯುವಾಹೊತ್ತು
ನಡೆಯುತ ಕನಸನೇಳುವಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

ವರ್ಷಗಳಿಂದ ಕಾದಿದ್ದ ಹೊತ್ತು
ಕೂಡಿಟ್ಟ ಮಾತನು ಹೇಳುವಾ ಹೊತ್ತು
ಇವಾಗಲೇ ಬರಬೇಕ್ಕಿತ್ತ ಅಷಾಡದ ಹೊತ್ತು

Saturday, June 21, 2008

ಏನಿದು? ಯಾಕಿದು? ಪ್ರೇಮವ...?

ಸಾವಿರಾ ಜನರ ಗುಂಪಿರಲಿ ಕಣ್ಣೇದುರಲಿ...
ನೀ ನಿದ್ದರೆ, ಮನಸು ಹೇಳುವುದು ಕ್ಷಣದಲೇ
ಏನಿದು? ಯಾಕಿದು? ಪ್ರೇಮವ...?

ಬೇರುಗಾಳಿಯೇ ಬೀಸಲಿ ನನಸುತಲು...
ನಾ ಅದರಲು, ನಿನ್ನ ಉಸಿರ ಕಾಣಬಲ್ಲೆನು
ಏನಿದು? ಯಾಕಿದು? ಪ್ರೇಮವ...?

ಇರುಳಲ್ಲಿ ಬರುವ ಕನಸಲ್ಲಿ ನೀ ಬಂದರೆ...
ಮರುದಿನ ಮನಸಲಿ ಎಂತದೋ ಸಂಭ್ರಮ
ಏನಿದು? ಯಾಕಿದು? ಪ್ರೇಮವ...?

ನಿನ್ನ ನಗುವಿನ ನೆನಪೊಂದು ತನುವ ಮರೆಸಿತು...
ನಿನ್ನ ತನುವಿನ ಸ್ಪರ್ಶವು ಜಗವ ಮರೆಸಿತು
ಏನಿದು? ಯಾಕಿದು? ಪ್ರೇಮವ...?

ನೀನಿಲ್ಲದೆ ಬೆಳೆದೇನು ಈ ಜಗದಲಿ...
ಇಂದು ನೀನಿಲ್ಲದೆ ಬದುಕಲಾರೆನು ಈದೆ ಜಗದಲಿ
ಏನಿದು? ಯಾಕಿದು? ಪ್ರೇಮವ...?

Wednesday, June 18, 2008

ಅಮ್ಮ ,ಹೆಂಡತಿ ಮತ್ತು ಅವಳು....

ನನಗೆ ತಿಳಿಯದೇ ಯಾರೋ ಮಲಗಿಸಿದರು
ಮೊದಲಬಾರಿಗೆ ಅಮ್ಮನ ಮಡಿಲಲ್ಲಿ,
ಹಾಳುಣ್ಣಿಸಿ ಮಮತೆಯ ಮಡಿಲಲ್ಲಿ ಬೆಳಸಿ
ಲೋಕವ ಅರಿಯುವ ಜ್ಞಾನ ತುಂಬಿದಳು,

ನನಗೆ ತಿಳಿದು ನಾನೇ ಮಲಗಿದೆ
ಮೊದಲ ರಾತ್ರಿಗೆ ನನ್ನ ಮಡಡಿಯೊಡನೆ,
ಸಿಹಿ ತಿಣ್ಣಿಸಿ ಪ್ರೀತಿಯ ತೋರಿಸಿ
ಲೋಕವ ಗೆಲ್ಲುವ ಚಲ್ಲ ತುಂಬಿದಳು,

ನನ್ನ ಕೆಳದೆ ನನ್ನ ಮಲಗಿಸುತ್ತಾಳೆ
ಕೊನೆಯಬಾರಿ ಭೂತಾಯಿಯ ಮಡಿಲಲ್ಲಿ ,
ಹಸಿವ ನಿಲ್ಲಿಸಿ, ಶಾಂತಿಯ ರೂಪ ತೋರಿಸಿ
ಲೋಕವ ಮರೆಯುವ ಚಿತ್ತ ತುಂಬುವಳು.

Tuesday, June 3, 2008

ಚಳೀ ಚಳೀ

ಯಲ್ಲರೂ ಹೇಳುತ್ತಿದ್ದರು
ಚಳೀ ಚಳೀ ಮೈ ಕೋರಿಯುವ ಚಳೀ
ನನಗೇಗೆ ತಿಳಿಯಬೇಕು ಚಳೀ?
ಕೂತಿರುವಾಗ ಚೆಲುವೆಯೊಬಳು
ನನ್ನ ಬಳಿ ....

ನಾ ನಡೆಯುವೆ

ದಿನಾ ನೀ ನಡೆಯುವೆ
ಒಂದೇ ಹಾದಿಯಲ್ಲಿ,
ನನ್ನಂಡನೆ ಒಮ್ಮೆ ನಡೆಯಬಾರದೇಕೆ?

ನನ್ನಂಡನೆ ನಡೆಯಳು
ನಿನಗೆ
ಮನಸಿಲ್ಲದಿದರೇನಂತೆ

ನಾ ನಡೆಯುವೆ
ನೀ ನಡೆದ ಹಾದಿಯಲ್ಲೇ
ನಿನ್ನ ನೆನಪಿನೊಡನೆ

Wednesday, May 28, 2008

ನನ್ನ ಮೈಸೂರು

ಅರಮನೆಯ ಊರೂ ಮೈಸೂರು
ಶ್ರಿಗಂಧದ ಊರೂ ಮೈಸೂರು
ಸಂಸೃತಿಯ ಊರೂ ಮೈಸೂರು
ಶೃಂಗಾರದ ಊರೂ ಮೈಸೂರು
ಸಂಗೀತದ ಊರೂ ಮೈಸೂರು
ಚಾಮಂಡಿಯ ಊರೂ ಮೈಸೂರು
ಮಲ್ಲಿಗೆಯ ಊರೂ ಮೈಸೂರು
ಹಸಿರಿನ ಊರೂ ಮೈಸೂರು
ದೆಸರೆಯ ಊರೂ ಮೈಸೂರು
ನನ್ನ ಊರೂ ಮೈಸೂರು
ನನ್ನ ಸೂರು ಮೈಸೂರು
ನನ್ನ್ ಉಸಿರು ಮೈಸೂರು

Wednesday, April 16, 2008

ಮದುವೆ ಮನೆಯಲ್ಲಿ

ಅದೊಂದು ಮದುವೆಯಮನೆ..
ಮೆಟಿಳಿಳುದುಬರುತಿದ್ದಳು ಅವಳು
ಜಾರಿ ಬಿದ್ದಿದ್ದು ನನ್ನ ಮನಸು,

ಎದೇಳುವ ಹೋತೀಗೆ…
ತಲುಪಿದ್ದೆ ಪ್ರೀತಿಯ ಅಂತರಂಗವನ್ನು
ಹೊರಬರಲು ಬಯಸಲಿಲ್ಲ ಮನವು,

ಕಳೆಯಿತು ದಿನಗಳು..
ಇಂದು ನಾವೀಬರು ಜೊತೆಗೆ ಕೂತೆವು…
ನಮ್ಮ ಮದುವೆಯ ಮಂಟಪದಲ್ಲಿ