ಸಾವಿರಾ ಜನರ ಗುಂಪಿರಲಿ ಕಣ್ಣೇದುರಲಿ...
ನೀ ನಿದ್ದರೆ, ಮನಸು ಹೇಳುವುದು ಕ್ಷಣದಲೇ
ಏನಿದು? ಯಾಕಿದು? ಪ್ರೇಮವ...?
ಬೇರುಗಾಳಿಯೇ ಬೀಸಲಿ ನನಸುತಲು...
ನಾ ಅದರಲು, ನಿನ್ನ ಉಸಿರ ಕಾಣಬಲ್ಲೆನು
ಏನಿದು? ಯಾಕಿದು? ಪ್ರೇಮವ...?
ಇರುಳಲ್ಲಿ ಬರುವ ಕನಸಲ್ಲಿ ನೀ ಬಂದರೆ...
ಮರುದಿನ ಮನಸಲಿ ಎಂತದೋ ಸಂಭ್ರಮ
ಏನಿದು? ಯಾಕಿದು? ಪ್ರೇಮವ...?
ನಿನ್ನ ನಗುವಿನ ನೆನಪೊಂದು ತನುವ ಮರೆಸಿತು...
ನಿನ್ನ ತನುವಿನ ಸ್ಪರ್ಶವು ಜಗವ ಮರೆಸಿತು
ಏನಿದು? ಯಾಕಿದು? ಪ್ರೇಮವ...?
ನೀನಿಲ್ಲದೆ ಬೆಳೆದೇನು ಈ ಜಗದಲಿ...
ಇಂದು ನೀನಿಲ್ಲದೆ ಬದುಕಲಾರೆನು ಈದೆ ಜಗದಲಿ
ಏನಿದು? ಯಾಕಿದು? ಪ್ರೇಮವ...?
ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.
ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.
ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ
Saturday, June 21, 2008
Wednesday, June 18, 2008
ಅಮ್ಮ ,ಹೆಂಡತಿ ಮತ್ತು ಅವಳು....
ನನಗೆ ತಿಳಿಯದೇ ಯಾರೋ ಮಲಗಿಸಿದರು
ಮೊದಲಬಾರಿಗೆ ಅಮ್ಮನ ಮಡಿಲಲ್ಲಿ,
ಹಾಳುಣ್ಣಿಸಿ ಮಮತೆಯ ಮಡಿಲಲ್ಲಿ ಬೆಳಸಿ
ಲೋಕವ ಅರಿಯುವ ಜ್ಞಾನ ತುಂಬಿದಳು,
ನನಗೆ ತಿಳಿದು ನಾನೇ ಮಲಗಿದೆ
ಮೊದಲ ರಾತ್ರಿಗೆ ನನ್ನ ಮಡಡಿಯೊಡನೆ,
ಸಿಹಿ ತಿಣ್ಣಿಸಿ ಪ್ರೀತಿಯ ತೋರಿಸಿ
ಲೋಕವ ಗೆಲ್ಲುವ ಚಲ್ಲ ತುಂಬಿದಳು,
ನನ್ನ ಕೆಳದೆ ನನ್ನ ಮಲಗಿಸುತ್ತಾಳೆ
ಕೊನೆಯಬಾರಿ ಭೂತಾಯಿಯ ಮಡಿಲಲ್ಲಿ ,
ಹಸಿವ ನಿಲ್ಲಿಸಿ, ಶಾಂತಿಯ ರೂಪ ತೋರಿಸಿ
ಲೋಕವ ಮರೆಯುವ ಚಿತ್ತ ತುಂಬುವಳು.
ಮೊದಲಬಾರಿಗೆ ಅಮ್ಮನ ಮಡಿಲಲ್ಲಿ,
ಹಾಳುಣ್ಣಿಸಿ ಮಮತೆಯ ಮಡಿಲಲ್ಲಿ ಬೆಳಸಿ
ಲೋಕವ ಅರಿಯುವ ಜ್ಞಾನ ತುಂಬಿದಳು,
ನನಗೆ ತಿಳಿದು ನಾನೇ ಮಲಗಿದೆ
ಮೊದಲ ರಾತ್ರಿಗೆ ನನ್ನ ಮಡಡಿಯೊಡನೆ,
ಸಿಹಿ ತಿಣ್ಣಿಸಿ ಪ್ರೀತಿಯ ತೋರಿಸಿ
ಲೋಕವ ಗೆಲ್ಲುವ ಚಲ್ಲ ತುಂಬಿದಳು,
ನನ್ನ ಕೆಳದೆ ನನ್ನ ಮಲಗಿಸುತ್ತಾಳೆ
ಕೊನೆಯಬಾರಿ ಭೂತಾಯಿಯ ಮಡಿಲಲ್ಲಿ ,
ಹಸಿವ ನಿಲ್ಲಿಸಿ, ಶಾಂತಿಯ ರೂಪ ತೋರಿಸಿ
ಲೋಕವ ಮರೆಯುವ ಚಿತ್ತ ತುಂಬುವಳು.
Tuesday, June 3, 2008
ನಾ ನಡೆಯುವೆ
ದಿನಾ ನೀ ನಡೆಯುವೆ
ಒಂದೇ ಹಾದಿಯಲ್ಲಿ,
ನನ್ನಂಡನೆ ಒಮ್ಮೆ ನಡೆಯಬಾರದೇಕೆ?
ನನ್ನಂಡನೆ ನಡೆಯಳು
ನಿನಗೆ
ಮನಸಿಲ್ಲದಿದರೇನಂತೆ
ನಾ ನಡೆಯುವೆ
ನೀ ನಡೆದ ಹಾದಿಯಲ್ಲೇ
ನಿನ್ನ ನೆನಪಿನೊಡನೆ
ಒಂದೇ ಹಾದಿಯಲ್ಲಿ,
ನನ್ನಂಡನೆ ಒಮ್ಮೆ ನಡೆಯಬಾರದೇಕೆ?
ನನ್ನಂಡನೆ ನಡೆಯಳು
ನಿನಗೆ
ಮನಸಿಲ್ಲದಿದರೇನಂತೆ
ನಾ ನಡೆಯುವೆ
ನೀ ನಡೆದ ಹಾದಿಯಲ್ಲೇ
ನಿನ್ನ ನೆನಪಿನೊಡನೆ
Subscribe to:
Posts (Atom)