ನಮಸ್ಕಾರ,
ನನ್ನನ ನಾನೇ ಈ materialized life ನಲ್ಲಿ ಹುಡಿಕಿಕೊಂಡು ಹೋಗುವಾಗ, ನನ್ನಲ್ಲಿ ಒಬ್ಬ ಕವಿಯಿದಾನೆ ಅನಿಸುತ್ತೆ. ಆ ಕವಿ ಗೀಚೊ ಕೆಲವು ಸಾಲನ್ನೇ ಈ blog ನಲ್ಲಿ ಬರೆದಿದ್ದೀನಿ. ನಿಮಗೆ Time ಸಿಕ್ಕಿದಾಗಾಲೆಲ್ಲ ಈ blog ಓತಾಯಿರಿ.

ಇಂತಿ ನಿಮ್ಮ
ಆತ್ಮಾನಂದ ಮಲ್ಲಪ್ಪ

Saturday, March 14, 2009

ಅಮ್ಮ ತಿಳೀದೇ ನಿನ್ನ

ಅಮ್ಮ ತಿಳೀದೇ ನಿನ್ನ
ಪ್ರೀತಿಯ ಆಳವನ್ನು
ನಾ ತಂದೆಯಾದ ಬಳಿಕ,

ಎಷ್ಟೂ ಬಾರೀ ಅತ್ತೂ ನೀ
ದೇವರ ಮೊರೆ ಹೊಗಿದೆಯೊ
ನನ್ನ ಹಠ ಮಾರಿತನಕೆ,

ನನ್ನ ಹಸಿವ ನೀ ತಿಳಿದೆ
ಅದನ ಅರಿಯದೆ ತುತ್ತು ಬೆಡ ಅಂದೆ
ನೀ ಹಸಿದೆ ನಾ ತಿನ್ನೊವರೆಗೆ,

ತಿರುಗಿ ನಿನ್ನ ಮಾತಿಗೆ ನಾ
ಮಾತಾಡಿದ ದಿನದಂದು
ನಿನ್ನ ಕರುಳೆಷ್ಟು ನೊಂದಿದೆಯೊ,

ಇಂದೆಕೊ ನಿನ್ನ ಮಡಿಲಲ್ಲಿ
ಮಲಗಬೇಕೆಂದಿದೆ ಮನವೂ
ಕ್ಷಮಿಸಿ ಮಲಗಿಸಿಕೋ ನನ್ನನು,